Maahiti 24

ಮಧ್ಯಪ್ರದೇಶ: ನಾಯಿ ಬೊಗಳಿತೆಂದು ಮಾಲೀಕರನ್ನೇ ಕೊಂದ ವ್ಯಕ್ತಿ

ನಾಯಿ ತನ್ನನ್ನು ನೋಡಿ ಬೊಗಳಿತು ಎನ್ನುವ ಕೋಪದಲ್ಲಿ ವ್ಯಕ್ತಿಯೊಬ್ಬ ಮಾಲೀಕರನ್ನೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಶನಿವಾರ ರಾತ್ರಿ ಮುಸಖೇಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಶಾಂತಿ ನಗರದ ನಿವಾಸಿಯಾಗಿದ್ದು, ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ರಾತ್ರಿ 10.30 ರ ಸುಮಾರಿಗೆ ಅವರು ಸಮುದಾಯ ಭವನದ ಬಳಿ ಇದ್ದಾಗ ನಾಯಿಯೊಂದು ನಿರಂತರವಾಗಿ ಬೊಗಳಲು ಪ್ರಾರಂಭಿಸಿತು ಮತ್ತು ಆ ವ್ಯಕ್ತಿಗೆ ರಸ್ತೆಯ ಮೂಲಕ ಹೋಗಲು ಸಾಧ್ಯವಾಗಲಿಲ್ಲ ಎಂದು ಆಜಾದ್‌ನಗರ ಪೊಲೀಸ್ ಠಾಣೆ ಪ್ರಭಾರಿ ನೀರಜ್ ಮೇಧಾ ತಿಳಿಸಿದ್ದಾರೆ. 65 ವರ್ಷದ ಮಹಿಳೆಯೊಬ್ಬರು ತನ್ನ ಮನೆಯಿಂದ ಹೊರಬಂದಿದ್ದರು ಮತ್ತು ಆ ವ್ಯಕ್ತಿ ಜತೆ ಜಗಳಕ್ಕಿಳಿದಿದ್ದರು.

ಆತ ಮಹಿಳೆಯ ಹೊಟ್ಟೆಗೆ ಒದ್ದಿದ್ದಾನೆ, ಆಕೆ ತಕ್ಷಣ ಕುಸಿದು ಬಿದ್ದಿದ್ದಾರೆ. ಅಲ್ಲಿದ್ದವರು ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆದರೆ ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಆರೋಪಿಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Exit mobile version