Maahiti 24

‘ವಯಸ್ಸಿಗೆ ತಕ್ಕ ಪಾತ್ರ ಮಾಡ್ತೀನಿ’: ಮುಂದಿನ ಪ್ಲ್ಯಾನ್​ ತಿಳಿಸಿದ ಶಾರುಖ್ ಖಾನ್​

‘ಡಂಕಿ’ ಬಿಡುಗಡೆ ಪ್ರಯುಕ್ತ ಶಾರುಖ್​ ಖಾನ್​ ಅವರು ಅನೇಕ ಕಡೆಗಳಿಗೆ ತೆರಳಿ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಟ್ಟಿದ್ದಾರೆ. ‘ಮಾರ್ಚ್​ ಮತ್ತು ಏಪ್ರಿಲ್​ ತಿಂಗಳಲ್ಲಿ ನನ್ನ ಮುಂದಿನ ಸಿನಿಮಾದ ಶೂಟಿಂಗ್​ ಶುರು ಆಗಲಿದೆ. ನನ್ನ ವಯಸ್ಸಿಗೆ ಸರಿ ಎನಿಸುವಂತಹ ಪಾತ್ರವನ್ನು ಮಾಡುತ್ತೇನೆ’ ಎಂದಿದ್ದಾರೆ.

ನಟ ಶಾರುಖ್​ ಖಾನ್​ (Shah Rukh Khan) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ದಿನದಿಂದ ದಿನಕ್ಕೆ ಅವರ ಬೇಡಿಕೆ ಹೆಚ್ಚುತ್ತಿದೆ. ಈ ವರ್ಷ ಅವರು ಬ್ಯಾಕ್​ ಟು ಬ್ಯಾಕ್​ ಗೆಲುವು ಕಂಡಿದ್ದಾರೆ. ‘ಜವಾನ್​’, ‘ಪಠಾಣ್​’ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಡಂಕಿ’ ಸಿನಿಮಾ (Dunki Movie) 100 ಕೋಟಿ ರೂಪಾಯಿ ಗಡಿ ಮುಟ್ಟಲು ಪ್ರಯತ್ನಿಸುತ್ತಿದೆ. ಸದ್ಯಕ್ಕೆ ಅವರ ಮುಂದಿನ ಸಿನಿಮಾ (Shah Rukh Khan Next Movie) ಯಾವುದು ಎಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಈ ನಡುವೆ ಶಾರುಖ್​ ಖಾನ್​ ಅವರು ಒಂದು ಅಚ್ಚರಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್ಮುಂದೆ ವಯಸ್ಸಿಗೆ ತಕ್ಕಂತಹ ಪಾತ್ರ ಮಾಡಲು ಅವರು ನಿರ್ಧರಿಸಿದ್ದಾರೆ.

‘ಡಂಕಿ’ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಶಾರುಖ್​ ಖಾನ್​ ಅವರು ಅನೇಕ ಕಡೆಗಳಿಗೆ ತೆರಳಿ ಸಂದರ್ಶನ ನೀಡಿದರು. ಈ ವೇಳೆ ಅವರು ಮುಂದಿನ ಸಿನಿಮಾ ಬಗ್ಗೆ ಸುಳಿವು ನೀಡಿದ್ದಾರೆ. ‘ಮಾರ್ಚ್​ ಮತ್ತು ಏಪ್ರಿಲ್​ ತಿಂಗಳಲ್ಲಿ ನನ್ನ ಮುಂದಿನ ಸಿನಿಮಾದ ಶೂಟಿಂಗ್​ ಶುರು ಆಗಲಿದೆ. ನನ್ನ ವಯಸ್ಸಿಗೆ ಸರಿ ಎನಿಸುವಂತಹ ಪಾತ್ರವನ್ನು ಮಾಡುತ್ತೇನೆ. ಆದರೂ ಕೂಡ ನಾನು ಹೀರೋ ಆಗಿರುತ್ತೇನೆ’ ಎಂದು ಅವರು ಹೇಳಿದ್ದಾರೆ.

ಶಾರುಖ್​ ಖಾನ್​ ಅವರಿಗೆ ಈಗ 58 ವರ್ಷ ವಯಸ್ಸು. ಈ ಪ್ರಾಯದ ವ್ಯಕ್ತಿಯ ಪಾತ್ರದಲ್ಲಿ ಅವರು ಹೇಗೆ ಕಾಣಿಸಿಕೊಳ್ಳಬಹುದು? ಕಥೆ ಯಾವ ರೀತಿ ಇರಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಯಾವ ನಿರ್ದೇಶಕರ ಜೊತೆ ಅವರು ಕೈ ಜೋಡಿಸುತ್ತಾರೆ ಎಂಬುದು ಕೂಡ ಇನ್ನೂ ಬಹಿರಂಗ ಆಗಲಿಲ್ಲ. ಕೆಲವು ನಿರ್ದೇಶಕರ ಜೊತೆ ಅವರು ಮಾತುಕಥೆ ನಡೆಯುತ್ತಿದ್ದಾರೆ. ಈ ಬಗ್ಗೆ ಹೊಸ ನ್ಯೂಸ್​ ಬೇಗ ಸಿಗಲು ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಶಾರುಖ್​ ಖಾನ್​ ಅಭಿನಯದ ‘ಡಂಕಿ’ ಸಿನಿಮಾ ಡಿಸೆಂಬರ್ 21ರಂದು ಬಿಡುಗಡೆ ಆಯಿತು. ಈ ಸಿನಿಮಾಗೆ ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿದ್ದಾರೆ. ತಾಪ್ಸಿ ಪನ್ನು ಅವರು ಶಾರುಖ್​ ಖಾನ್​ಗೆ ಜೋಡಿಯಾಗಿ ನಟಿಸಿದ್ದಾರೆ. ಅಂದುಕೊಂಡ ಮಟ್ಟಕ್ಕೆ ಈ ಸಿನಿಮಾ ಕಲೆಕ್ಷನ್​ ಮಾಡಿಲ್ಲ. ಮೂರು ದಿನಕ್ಕೆ ಅಂದಾಜು 75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ಸಲಾರ್​’ ಸಿನಿಮಾದಿಂದ ಭಾರಿ ಪೈಪೋಟಿ ಎದುರಿಸುತ್ತಿದೆ.

Exit mobile version