Tuesday, December 17, 2024
Homeಆರೋಗ್ಯಶಾಲೆ ಹಾಗೂ ಕೈಗಾರಿಕೆಗಳ ಸಮಯ ಬದಲಾವಣೆ ಸಾಧ್ಯವಿಲ್ಲ: ಹೈಕೋರ್ಟ್‌ಗೆ ಶಿಕ್ಷಣ, ಕಾರ್ಮಿಕ ಇಲಾಖೆ ಮಾಹಿತಿ

ಶಾಲೆ ಹಾಗೂ ಕೈಗಾರಿಕೆಗಳ ಸಮಯ ಬದಲಾವಣೆ ಸಾಧ್ಯವಿಲ್ಲ: ಹೈಕೋರ್ಟ್‌ಗೆ ಶಿಕ್ಷಣ, ಕಾರ್ಮಿಕ ಇಲಾಖೆ ಮಾಹಿತಿ

ಬೆಂಗಳೂರಿನ ಸಂಚಾರ ದಟ್ಟಣೆ ತಪ್ಪಿಸಲು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಶಾಲೆ ಹಾಗೂ ಕೈಗಾರಿಕೆಗಳ ಸಮಯ ಬದಲಾವಣೆ ಸಾಧ್ಯವಿಲ್ಲ ಎಂದು ಸಂಬಂಧಪಟ್ಟವರೊಂದಿಗಿನ ಸಮಾಲೋಚನೆಯ ವರದಿಯನ್ನು ಶಿಕ್ಷಣ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದೆ. 

ಬೆಂಗಳೂರು, ಡಿಸೆಂಬರ್​​ 18: ಬೆಂಗಳೂರಿನಲ್ಲಿ ವಾಹನ ದಟ್ಟಣೆ ತಪ್ಪಿಸಲು ಹೈಕೋರ್ಟ್ (High Court)​​ ಸರ್ಕಾರಕ್ಕೆ ಸಲಹೆ ನೀಡಿತ್ತು. ಶಾಲೆ ಹಾಗೂ ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆಗೆ ಸಲಹೆ ನೀಡಿತ್ತು. ಇದೀಗ ಶಾಲೆ ಹಾಗೂ ಕೈಗಾರಿಕೆಗಳ ಸಮಯ ಬದಲಾವಣೆ ಸಾಧ್ಯವಿಲ್ಲ ಎಂದು ಸಂಬಂಧಪಟ್ಟವರೊಂದಿಗಿನ ಸಮಾಲೋಚನೆಯ ವರದಿಯನ್ನು ಶಿಕ್ಷಣ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದೆ.

ಮಕ್ಕಳನ್ನು ನಿದ್ರೆಯಿಂದ ಬೇಗ ಎಚ್ಚರಿಸಿದರೆ ನಿದ್ರಾಹೀನತೆ ಸಮಸ್ಯೆ ಉಂಟಾಗುವುದು. ಆರೋಗ್ಯಕರ ಉಪಾಹಾರ ಸೇವನೆಗೂ ಸಮಯ ಸಿಗದಂತಾಗಲಿದೆ. ಶಾಲೆಗಳ ಬಳಿ ದಟ್ಟಣೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕೆಗಳ ಸಮಯ ಬದಲಾವಣೆಯಿಂದ ದಟ್ಟಣೆ ಕಡಿಮೆಯಾಗುವುದಿಲ್ಲ. ಶಿಫ್ಟ್‌ಗಳಲ್ಲಿ ಕಾರ್ಮಿಕರು ಕೆಲಸ ಮಾಡುವುದರಿಂದ ದಟ್ಟಣೆಗೆ ಕಾರಣವಾಗುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶಿಕ್ಷಣ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಸಲ್ಲಿಸಿದ್ದ ವರದಿಯನ್ನು CJ ಪ್ರಸನ್ನ ಬಿ ವರಾಳೆ, ನ್ಯಾ.ಕೃಷ್ಣದೀಕ್ಷಿತ್‌ರಿದ್ದ ಪೀಠದಲ್ಲಿ ವಿಚಾರಣೆ ಮಾಡಲಾಗಿದ್ದು, ಜನವರಿ ಮೊದಲ ವಾರಕ್ಕೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಸಮರ್ಪಣ ಸಾಂಸ್ಕೃತಿಕ ಸೇವಾ ಸಂಸ್ಥೆ ಪಿಐಎಲ್ ಸಲ್ಲಿಸಿತ್ತು.

ಶಾಲಾ ಆರಂಭದ ಸಮಯ ಬದಲಾವಣೆಯಿಂದಾಗುವ ಸಮಸ್ಯೆ

ಸಮಯ ಬದಲಾವಣೆಗೆ ಕೆಲ ಖಾಸಗಿ ಶಾಲೆಗಳ ಒಕ್ಕೂಟಗಳಿಂದ ವಿರೋಧ ವ್ಯಕ್ತವಾಗಿತ್ತು. ಬೇಗ ಶಾಲೆ ಆರಂಭ ಮಾಡುವುದಕ್ಕೆ ಪೋಷಕರಿಂದಲೂ ವಿರೋಧ ವ್ಯಕ್ತವಾಗಿತ್ತು. ಪರ್ಯಾಯ ಮಾರ್ಗದ ಕುರಿತು ಕೆಲ ಖಾಸಗಿ ಸಂಘಟನೆಯಿಂದ ಸಲಹೆ ನೀಡಲಾಗಿತ್ತು. ಹಾಗಾದರೆ, ಶಾಲಾ ಆರಂಭದ ಸಮಯ ಬದಲಾವಣೆಯಿಂದ ಆಗುವ ಸಮಸ್ಯೆ ಏನು?

ಇದನ್ನೂ ಓದಿ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಶಾಲೆಯ ಸಮಯ ಬದಲಾವಣೆ; ಖಾಸಗಿ, ಸರ್ಕಾರಿ ಶಾಲೆಗಳ ಪ್ರತಿನಿಧಿಗಳ ಜತೆ ಸಭೆ ನಡೆಸಲಿದೆ ಸರ್ಕಾರ

ಮಕ್ಕಳು ಬೆಳಗ್ಗೆ ಬೇಗ ಏಳಬೇಕು, ಪೋಷಕರು ಕೆಲಸಕ್ಕೆ ಹೋಗಲು ಕಷ್ಟ, ಮಕ್ಕಳ ದೈಹಿಕ ಚಟುವಟಿಕೆಗೆ ಕಡಿಮೆ ಕಾಲಾವಕಾಶ ಸಿಗುತ್ತದೆ, ಮಕ್ಕಳು ಕಡಿಮೆ ನಿದ್ದೆ ಮಾಡಿದರೆ ಆರೋಗ್ಯ ಸಮಸ್ಯೆಯಾಗಬಹುದು. ಈ ಕಾರಣಗಳಿಗೆ ಶಾಲಾ ಸಮದಲ್ಲಿ ಬದಲಾವಣೆಗೆ ವಿರೋಧ ವ್ಯಕ್ತವಾಗಿತ್ತು.

RELATED ARTICLES

Most Popular

Recent Comments