ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ 8 ನಿರ್ಣಯಗಳನ್ನು ಮಂಡನೆ ಮಾಡಲಾಗಿದೆ. ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ನಿರ್ಣಯ ಮಂಡನೆ ಮಾಡಿದ್ದಾರೆ. ನಿರ್ಣಯಗಳಾವುವು ಎನ್ನುವ ವಿವರ ಇಲ್ಲಿದೆ.
ದಾವಣಗೆರೆ, (ಡಿಸೆಂಬರ್ 24): ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾಅಧಿವೇಶನದಲ್ಲಿ(lingayat 24th Maha Adhiveshan) 8 ನಿರ್ಣಯಗಳನ್ನು ಮಂಡನೆ ಮಾಡಲಾಗಿದೆ. ದಾವಣಗೆರೆಯ(Davanagere) ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ನಡೆದ 24ನೇ ಮಹಾಅಧಿವೇಶನದಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಎಂಟು ನಿರ್ಣಯ ಮಂಡನೆ ಮಾಡಿದರು. ಎಲ್ಲ ಲಿಂಗಾಯತರು ಧರ್ಮದ ಕಾಲಂನಲ್ಲಿ ವೀರಶೈವ ಎಂದು ಬರೆಸಬೇಕು ಎನ್ನುವ ನಿರ್ಣಯ ಒಳಗೊಂಡಂತೆ ಇನ್ನುಳಿದ ಏಳು ನಿರ್ಣಯಗಳಾಗುವುವು ಎನ್ನುವುದು ಈ ಕೆಳಗಿನಂತಿವೆ ನೋಡಿ.
ಮಹಾಸಭೆಯ 24ನೇ ಮಹಾಅಧಿವೇಶನದಲ್ಲಿ 8 ನಿರ್ಣಯಗಳು ಇಂತಿವೆ.
- ದೇಶದ ಅಖಂಡತೆ, ಏಕತೆ & ಭದ್ರತೆಗೆ ಮೊದಲ ಆದ್ಯತೆ
- ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಬಸವಣ್ಣನವರ ಹೆಸರು ಘೋಷಿಸಬೇಕು.
- ಕೇಂದ್ರದ ಒಬಿಸಿ ಪಟ್ಟಿಗೆ ಎಲ್ಲ ಲಿಂಗಾಯತರನ್ನು ಸೇರ್ಪಡೆ ಮಾಡಬೇಕು.
- ಜಾತಿಗಣತಿ 8 ವರ್ಷ ಹಳೆಯದಾಗಿದ್ದು ಹೊಸದಾಗಿ ಜಾತಿಗಣತಿ ಮಾಡಬೇಕು.
- ಜಾತಿಗಣತಿ ವೇಳೆ ಎಲ್ಲ ಲಿಂಗಾಯತರು ವೀರಶೈವ ಎಂದು ಬರೆಸಬೇಕು.
- ಎಲ್ಲ ಲಿಂಗಾಯತರು ಧರ್ಮದ ಕಾಲಂನಲ್ಲಿ ವೀರಶೈವ ಎಂದು ಬರೆಸಬೇಕು.
- ಮಾಜಿ ಸಿಎಂ ನಿಜಲಿಂಗಪ್ಪರ ನಿವಾಸ ಸರ್ಕಾರ ಖರೀದಿಸಿ ಸ್ಮಾರಕಮಾಡಬೇಕು.
- ಅನುಭವ ಮಂಟಪದ ಮೂಲ ಪುರುಷ ಬಸವಣ್ಣನವರ ಹೆಸರು ಘೋಷಿಸಬೇಕು