Sunday, December 22, 2024
Homeಮತ್ತಸ್ಟುವಾಣಿಜ್ಯWorking Hours: ಹೆಚ್ಚು ಅವಧಿ ಕೆಲಸ ಮಾಡಿ, ಜೀವನದ ಜೊತೆ ಕೆಲಸ ಮಿಳಿತಗೊಳಿಸಿ: ಉದ್ಯೋಗಿಗಳಿಗೆ ಅಮೆರಿಕನ್...

Working Hours: ಹೆಚ್ಚು ಅವಧಿ ಕೆಲಸ ಮಾಡಿ, ಜೀವನದ ಜೊತೆ ಕೆಲಸ ಮಿಳಿತಗೊಳಿಸಿ: ಉದ್ಯೋಗಿಗಳಿಗೆ ಅಮೆರಿಕನ್ ಸಿಇಒ ನೀರಜ್ ಶಾ ಕರೆ

CEO Neeraj Shah: ಸೋಮಾರಿತನಕ್ಕೆ ಇತಿಹಾಸದಲ್ಲಿ ಹೆಚ್ಚು ಯಶಸ್ಸು ಸಿಕ್ಕಿಲ್ಲ. ಹೆಚ್ಚು ಅವಧಿ ಕೆಲಸ ಮಾಡಬೇಕು ಎಂದು ವೇಫೇರ್ ಇಕಾಮರ್ಸ್ ಸಂಸ್ಥೆಯ ಸಿಇಒ ನೀರಜ್ ಶಾ ತನ್ನ ಉದ್ಯೋಗಿಗಳಿಗೆ ತಿಳಿಸಿದ್ದಾರೆ. ತಾವೆಲ್ಲರೂ ಮಹತ್ವಾಕಾಂಕ್ಷಿ ವ್ಯಕ್ತಿಗಳು. ತಮ್ಮ ಕೆಲಸ ಪರಿಣಾಮಕಾರಿ ಎನಿಸುವಂತೆ ಫಲ ಕೊಡಬೇಕು ಎಂದು ಬಯಸುವವರು. ಅದಕ್ಕಾಗಿ ಶ್ರಮ ಪಡಬೇಕು ಎಂದು ವೇಫೇರ್ ಸಿಇಒ ತಿಳಿಸಿದ್ದಾರೆ.

ನವದೆಹಲಿ, ಡಿಸೆಂಬರ್ 24: ಇವತ್ತಿನ ಯುವ ಉದ್ಯೋಗಿಗಳು ಒಂದು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಕೊಟ್ಟಿದ್ದ ಕರೆಗೆ ಇದೀಗ ಅಮೆರಿಕದ ಕಂಪನಿಯೊಂದರ ಸಿಇಒ ಧ್ವನಿಗೂಡಿಸಿದ್ದಾರೆ. ವೇ ಫೇರ್ ಎಂಬ ಆನ್ಲೈನ್ ಪೀಠೋಪಕರಣ ಮಾರಾಟ ಕಂಪನಿಯ ಸಿಇಒ ನೀರಜ್ ಶಾ ತಮ್ಮ ಉದ್ಯೋಗಿಗಳಿಗೆ ಹೆಚ್ಚು ಅವಧಿ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ. ಸೋಮಾರಿತನಕ್ಕೆ ಇತಿಹಾಸದಲ್ಲಿ ಹೆಚ್ಚು ಯಶಸ್ಸು ಸಿಕ್ಕಿಲ್ಲ ಎಂದಿರುವ ಅವರು, ಸಾಕಷ್ಟು ಅವಧಿ ಕೆಲಸ ಮಾಡಬೇಕು. ಜೀವನದಲ್ಲಿ ಕೆಲಸವನ್ನು ಮಿಳಿತಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

‘ಗೆಲುವಿಗೆ ಕಠಿಣ ಪರಿಶ್ರಮ ಅಗತ್ಯ. ನಾವೆಲ್ಲರೂ ಮಹತ್ವಾಂಕ್ಷೆಗಳಿರುವ ವ್ಯಕ್ತಿಗಳು. ನಮ್ಮ ಶ್ರಮ ಮತ್ತು ಪ್ರಯತ್ನಗಳು ಗಮನಾರ್ಹ ಎನಿಸಿದರೆ ಖುಷಿ ಪಡುವ ವ್ಯಕ್ತಿಗಳು ನಾವೆಂಬುದು ನನ್ನ ಅನಿಸಿಕೆ,’ ಎಂದು ಭಾರತದ ಮೂಲದ ಈ ಅಮೆರಿಕನ್ ಸಿಇಒ ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ತಿಳಿಸಿದರೆನ್ನಲಾಗಿದೆ.

‘ಹೆಚ್ಚು ಅವಧಿ ಕೆಲಸ ಮಾಡುವುದು, ಸ್ಪಂದನಾಶೀಲತೆಯಿಂದ ಇರುವುದು, ಕೆಲಸ ಮತ್ತು ಜೀವನವನ್ನು ಮಿಳಿತಗೊಳಿಸುವುದು, ಇವಕ್ಕೆ ಹಿಂಜರಿಯುವಂತಿಲ್ಲ. ಸೋಮಾರಿತನಕ್ಕೆ ಯಶಸ್ಸು ಸಿಕ್ಕ ಇತಿಹಾಸ ಸಾಕಷ್ಟಿಲ್ಲ,’ ಎಂದು ಅವರು ಹೇಳಿದ್ದಾಗಿ ಸಿಎನ್​ಎನ್ ಸುದ್ದಿವಾಹಿನಿ ವರದಿ ಮಾಡಿದೆ.

‘ಈ ದಿಕ್ಕಿನಲ್ಲಿ ನಾವೆಲ್ಲರೂ ಒಮ್ಮುಖವಾಗಿ ಸಾಗಿದರೆ ಇನ್ನೂ ಬೇಗ ಗೆಲ್ಲಬಹುದು. ನಾವು ಆಕ್ರಮಣಕಾರಿ ಪ್ರವೃತ್ತಿ ಹೊಂದಿರೋಣ, ಗ್ರಾಹಕ ಕೇಂದ್ರಿತರಾಗಿರೋಣ, ಸ್ಮಾರ್ಟ್ ಆಗಿರೋಣ’ ಎಂದು ಉದ್ಯೋಗಿಗಳಿಗೆ ನೀರತ್ ಶಾ ತಿಳಿಸಿದ್ದಾರೆ.

ವೇಫೇರ್ ಸಂಸ್ಥೆ ಪೀಠೋಪರಣವನ್ನು ಆನ್​ಲೈನ್​ನಲ್ಲಿ ಮಾರುವ ಇಕಾಮರ್ಸ್ ಸಂಸ್ಥೆ. ಅಮೆರಿಕದ ಮಸಾಚುಸೆಟ್ಸ್ ರಾಜ್ಯದ ಬೋಸ್ಟೋನ್ ನಗರದಲ್ಲಿ ಮುಖ್ಯಕಚೇರಿ ಹೊಂದಿದೆ. 2022ರಲ್ಲಿ ವೇಫೇರ್ ಶೇ. 5ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿತ್ತು. ವೆಚ್ಚ ಉಳಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಇದರಿಂದ ಸಂಸ್ಥೆ ಮತ್ತೆ ಲಾಭದ ಹಳಿಗೆ ಮರಳಿತು ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments