Monday, December 23, 2024
Homeವಿಜ್ಞಾನ - ತಂತ್ರಜ್ಞಾನಎರಡೇ ದಿನ ಬಾಕಿ: ಭಾರತಕ್ಕೆ ಬರುತ್ತಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ A15 5G, ಗ್ಯಾಲಕ್ಸಿ A25 5G

ಎರಡೇ ದಿನ ಬಾಕಿ: ಭಾರತಕ್ಕೆ ಬರುತ್ತಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ A15 5G, ಗ್ಯಾಲಕ್ಸಿ A25 5G

alaxy A15 5G and Galaxy A25 5G Launch date: ಇದೇ ಡಿಸೆಂಬರ್ 26 ರಂದು ಭಾರತದಲ್ಲಿ ಗ್ಯಾಲಕ್ಸಿ A25 5G ಮತ್ತು ಗ್ಯಾಲಕ್ಸಿ A15 5G ಸ್ಮಾರ್ಟ್‌ಫೋನ್‌ಗಳು ಅನಾವರಣಗೊಳ್ಳಲಿದೆ. ಆದಾಗ್ಯೂ, ಈ ಫೋನಿನ ನಿಖರವಾದ ಬೆಲೆ, ಫೀಚರ್​ಗಳನ್ನ ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ಕಳೆದ ಕೆಲವು ವಾರಗಳಿಂದ ಬಹಳಷ್ಟು ರೋಚಕತೆ ಸೃಷ್ಟಿಸಿರುವ ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್ (Samsung) ಕಂಪನಿ ಮುಂಬರುವ ಸ್ಮಾರ್ಟ್​ಫೋನ್​ನ ಬಿಡುಗಡೆ ದಿನಾಂಕ ಇದೀಗ ಬಹಿರಂಗವಾಗಿದೆ. ಗ್ಯಾಲಕ್ಸಿ A25 5G ಮತ್ತು ಗ್ಯಾಲಕ್ಸಿ A15 5G ಸ್ಮಾರ್ಟ್‌ಫೋನ್‌ಗಳ ಭಾರತ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಕಂಪನಿ ತಿಳಿಸಿದೆ. ಇದೇ ಡಿಸೆಂಬರ್ 26 ರಂದು ಭಾರತದಲ್ಲಿ ಈ ಎರಡೂ ಫೋನುಗಳು ಅನಾವರಣಗೊಳ್ಳಲಿದೆ. ಆದಾಗ್ಯೂ, ಈ ಫೋನಿನ ನಿಖರವಾದ ಬೆಲೆ, ಫೀಚರ್​ಗಳನ್ನ ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ವಿಯೆಟ್ನಾಂನಲ್ಲಿ, ಗ್ಯಾಲಕ್ಸಿ A25 5Gಯ 6GB+128GB ಸ್ಟೋರೇಜ್ ರೂಪಾಂತರಕ್ಕೆ VND 65,90,000, ಅಂದರೆ ಭಾರತದಲ್ಲಿ ಸುಮಾರು ರೂ 22,650 ಎನ್ನಬಹುದು. ಗ್ಯಾಲಕ್ಸಿ A15 5Gಗೆ VND 62,89,800 (ಅಂದಾಜು ರೂ 21,500). ಭಾರತದಲ್ಲಿ ಈ ಫೋನುಗಳ ಬೆಲೆ 25,000 ರೂ. ಒಳಗೆ ಇರಬಹುದು ಎನ್ನಲಾಗಿದೆ.

ಗ್ಯಾಲಕ್ಸಿ A15 5G ಫೀಚರ್ಸ್ ಏನಿರಬಹುದು?:

ಡಿಸ್​ಪ್ಲೇ: ಗ್ಯಾಲಕ್ಸಿ A15 5G ಫೋನ್ 6.5-ಇಂಚಿನ FHD+ ಸೂಪರ್ AMOLED ಡಿಸ್​ಪ್ಲೇಯನ್ನು ಹೊಂದಿದೆ, ಇದು ಇನ್ಫಿನಿಟಿ U ಡಿಸ್​ಪ್ಲೇ ಆಗಿದ್ದು, 90Hz ರಿಫ್ರೆಶ್ ರೇಟ್ ದರದಿಂದ ಕೂಡಿದೆ.

ಚಿಪ್ಸೆಟ್: ಈ ಸ್ಮಾರ್ಟ್​ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6100+ SoC ಮತ್ತು Mali G57-MP2 GPU ನಿಂದ ಚಾಲಿತವಾಗಿದೆ.

ಹಿಂಬದಿಯ ಕ್ಯಾಮೆರಾಗಳು: ಈ 5G ಫೋನ್‌ನಲ್ಲಿ ಹಿಂಬದಿಯ ಕ್ಯಾಮೆರಾ ಸೆಟಪ್ 50MP ಮುಖ್ಯ ಕ್ಯಾಮೆರಾ, 5MP ಅಲ್ಟ್ರಾವೈಡ್ ಆಂಗಲ್ ಸೆನ್ಸಾರ್ ಮತ್ತು 2MP ಡೆಪ್ತ್ ಲೆನ್ಸ್​ನಿಂದ ಕೂಡಿದೆ.

ಸೆಲ್ಫಿ ಕ್ಯಾಮೆರಾ: ಮುಂಭಾಗದಲ್ಲಿ, ಗ್ಯಾಲಕ್ಸಿ A15 5G ಫೋನ್ 13MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಓಎಸ್: ಗ್ಯಾಲಕ್ಸಿ A15 5G ಆಂಡ್ರಾಯ್ಡ್ 13 ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಬ್ಯಾಟರಿ: 25W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.

ಗ್ಯಾಲಕ್ಸಿ A25 5G ಫೀಚರ್ಸ್ ಏನಿರಬಹುದು?:

ಡಿಸ್​ಪ್ಲೇ: ಗ್ಯಾಲಕ್ಸಿ A25 5G ಫೋನ್ 6.5-ಇಂಚಿನ FHD+ ಸೂಪರ್ AMOLED ಡಿಸ್​ಪ್ಲೇ, ಇನ್ಫಿನಿಟಿ U ಡಿಸ್​ಪ್ಪೇ, 120Hz ರಿಫ್ರೆಶ್ ರೇಟ್ ದರದಿಂದ ಕೂಡಿದೆ.

ಚಿಪ್‌ಸೆಟ್: ಈ ಸ್ಮಾರ್ಟ್‌ಫೋನ್ ಎಕ್ಸಿನೊಸ್ 1280 SoC ಮತ್ತು Mali-G68 MP4 GPU ನಿಂದ ಚಾಲಿತವಾಗಿದೆ.

ಹಿಂಬದಿಯ ಕ್ಯಾಮೆರಾಗಳು: ಹಿಂಬದಿಯ ಕ್ಯಾಮೆರಾ ಸೆಟಪ್ 50MP OIS ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಡೆಪ್ತ್ ಲೆನ್ಸ್ ಅನ್ನು ಒಳಗೊಂಡಿದೆ.

ಸೆಲ್ಫಿ ಕ್ಯಾಮೆರಾ: ಗ್ಯಾಲಕ್ಸಿ A25 5G ಸೆಲ್ಫಿಗಾಗಿ 13MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಓಎಸ್: ಗ್ಯಾಲಕ್ಸಿ A25 5G ಆಂಡ್ರಾಯ್ಡ್ 13 ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಬ್ಯಾಟರಿ: ಈ ಸ್ಮಾರ್ಟ್​ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 25W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments