Monday, December 23, 2024
Homeರಾಜ್ಯಚಿಕ್ಕಮಗಳೂರಿನಲ್ಲಿ ದತ್ತಜಯಂತಿಗೆ ಶ್ರೀ ರಾಮ ಸೇನೆ ನಿರ್ಧಾರ; ಜಿಲ್ಲೆಗೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್​ಗೆ ನಿರ್ಬಂಧ

ಚಿಕ್ಕಮಗಳೂರಿನಲ್ಲಿ ದತ್ತಜಯಂತಿಗೆ ಶ್ರೀ ರಾಮ ಸೇನೆ ನಿರ್ಧಾರ; ಜಿಲ್ಲೆಗೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್​ಗೆ ನಿರ್ಬಂಧ

ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿಗೆ ಶ್ರೀ ರಾಮ ಸೇನೆ(Sri Ram Sena) ನಿರ್ಧಾರ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್(Pramod Muthalik) ಹಾಗೂ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಚಿಕ್ಕಮಗಳೂರು, ಡಿ.24: ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿಗೆ ಶ್ರೀ ರಾಮ ಸೇನೆ(Sri Ram Sena) ನಿರ್ಧಾರ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್(Pramod Muthalik) ಹಾಗೂ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದಿನಿಂದ 2024 ಜನವರಿ 22ರ ವರೆಗೂ ಇಬ್ಬರಿಗೂ ಕೋಮು ಪ್ರಚೋದನೆ , ಗಲಭೆಗೆ ಕುಮ್ಮಕ್ಕು ಕಾರಣ ನೀಡಿ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದೆ.

ಡಿ: 26 ರಂದು ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿಗೆ ಸಿದ್ದತೆ

ದತ್ತ ಜಯಂತಿ ಆಚರಣೆಗೆ ಶ್ರೀರಾಮ ಸೇನೆ ಮುಂದಾಗಿದ್ದು, ಡಿ.26 ರಂದು ಸಿದ್ದತೆ ಮಾಡಿಕೊಂಡಿದೆ. ಆ ಮೂಲಕ ದರ್ಗಾದಲ್ಲಿಇದೆ ಮೊದಲ ಬಾರಿಗೆ ದತ್ತಜಯಂತಿ ಆಚರಣೆಗೆ ಶ್ರೀ ರಾಮ ಸೇನೆ ಪ್ಲ್ಯಾನ್​​ ಮಾಡಿಕೊಂಡಿತ್ತು. ಈ ವೇಳೆ ಮಾತನಾಡಿದ್ದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ‘ಮುಸ್ಲಿಂರು ನಮ್ಮ ದತ್ತಪೀಠದಲ್ಲಿ ಉರುಸ್ ಆಚರಣೆ ಮಾಡುತ್ತಾರೆ. ನಾವು ನಾಗೇನಹಳ್ಳಿ ದರ್ಗಾದಲ್ಲಿ ಡಿ.26ರಂದು ದತ್ತಜಯಂತಿ ಆಚರಣೆ ಮಾಡುತ್ತೇವೆ ಎಂದಿದ್ದರು.

ಜಿಲ್ಲೆಯಾದ್ಯಂತ ಬೀಗಿ ಬಂದೋಬಸ್ತ್​

ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಜಯಂತಿ ಆಚರಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 28 ಚೆಕ್​ಪೋಸ್ಟ್​, 300ಕ್ಕೂ ಹೆಚ್ಚು ಸಿಸಿ ಕ್ಯಾಮರಾ, 50ಕ್ಕೂ ಬಾಡಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಜೊತೆಗೆ ಪ್ರತಿಯೊಂದು ಚೆಕ್​ಪೋಸ್ಟ್​ಗೂ ವಿಶೇಷ ದಂಡಾಧಿಕಾರಿಗಳ ನೇಮಕ ಮಾಡಲಾಗಿದೆ. 7 ಎಎಸ್​ಪಿ, 30 ಡಿವೈಎಸ್​​ಪಿ, 30 ಇನ್ಸ್​ಪೆಕ್ಟರ್​ಗಳು, 100 ಹೋಂಗಾರ್ಡ್, 20 ಕೆಎಸ್​ಆರ್​ಪಿ, 25 ಡಿಎಆರ್​​ ನಿಯೋಜನೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments