‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿರುವ ತೃಪ್ತಿ ದಿಮ್ರಿ ಕೂಡ ಸಖತ್ ಜನಪ್ರಿಯತೆ ಪಡೆದಿದ್ದಾರೆ. ಅವರು ಈಗ ಹೊಸ ಬಾಯ್ಫ್ರೆಂಡ್ ಜೊತೆ ಅವರು ಸುತ್ತಾಡುತ್ತಿದ್ದಾರಂತೆ.
ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್ ಜೊತೆ ನಟಿ ತೃಪ್ತಿ ದಿಮ್ರಿ (Tripti Dimri) ಸುತ್ತಾಟ ನಡೆಸಿದ್ದರು. ಆದರೆ, ಕೆಲವೇ ವರ್ಷಗಳಲ್ಲಿ ಇವರ ಪ್ರೀತಿ ಕೊನೆ ಆಯಿತು. ಈಗ ಕರ್ಣೇಶ್ ಅವರು ನಿರ್ಮಾಣ ಸಂಸ್ಥೆಯ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ತೃಪ್ತಿ ದಿಮ್ರಿ ಅವರು ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಅವರ ಬಾಯ್ಫ್ರೆಂಡ್ ವಿಚಾರದ ಬಗ್ಗೆ ಚರ್ಚೆ ಜೋರಾಗಿದೆ. ಕರ್ಣೇಶ್ ಶರ್ಮಾ (Karnesh Sharma) ಜೊತೆಗಿನ ಬ್ರೇಕಪ್ ಬಳಿಕ ತೃಪ್ತಿಗೆ ಹೊಸ ಬಾಯ್ಫ್ರೆಂಡ್ ಸಿಕ್ಕಿರುವುದಾಗಿ ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.